Posts

Showing posts from December, 2016

ತಿರುಗ ಬಾಣದ ಮಾತು

ನಿನ್ನಂಥ ಮನಕೆ
ಮರುಳಾಗದವರುಂಟೆ..
ಎಲ್ಲಾ ಹುಡುಗಿಯರಂತೆ
ನಾನೂ ಹೇಳುವೆನು
ಸಿಗುವನು ನಿನಗೆ
ಒಳ್ಳೆಯ ಹುಡುಗ
ನನಗಿಂತ ಚೆಲುವ 😄

ದ್ವೇಷ

ದ್ವೇಷ ಮಾಡಿ
ಅದಾವ ದೇಶ
ಕಟ್ಟಿದರೇನು.?
ಪ್ರೀತಿ ಇಲ್ಲದ ಮೇಲೆ.

ಚಳಿಗಾಲ

ಚಳಿಗಾಲದಲ್ಲಿ ತುಟಿ ಒಣಗುತ್ತವೆ
ಅವಳೆದುರಿದ್ದರೆ ನಡುಗುತ್ತವೆ.. 😍😘😘

ಬೆಳಕು

ಕ್ಷಣಕಾಲ ಮಿಂಚಿ
ಮರೆಯಾಗುವೆ ನಾನು
ಹಣತೆಯಂತೆ ಬೆಳಗು
ಮನೆತುಂಬಾ ಮೂನು.

ದೃಷ್ಟಿ

ಹುಡುಗಿ
ನಿನಗೆ ದೃಷ್ಟಿ ಆದಿತು ಹೆಚ್ಚೆ
ಅದಕೆ ಕೆನ್ನೆ ಮೇಲಿದೆ ಮಚ್ಚೆ. :P

ಚಳಿಗಾಲ

ಈ ಚಳಿಗಾಲದಲ್ಲಿ
ಅವಳಿರಬೇಕಿತ್ತು
ತಬ್ಬಿಕೊಂಡು
ಬೆಚ್ಚಗಿರಲು.. 😍😘

ಸಾಲ

ಸಾಲ ಕೇಳಿ
ನನ್ನನ್ನು
ಕುಬೇರನೆಂಬಂತೆ
ನೋಡಬೇಡಿ :P

ಮಾತು

ಮಾತಿಗೆ ಪ್ರೇರಣೆ
ಮೌನವೇ ಕಾರಣ..

ಮಗು-ನಗು

ಮಗು ಜೊತೆಗಿದ್ರೆ,
ನಗು ತಾನಾಗೆ ಬರುತ್ತೆ :D

ಗುಡ್

Goodಗಿಂತ
#Better,
Best ಅಲ್ವಾ? :P

ಮಹಾವಂಚಕಿ

ಅವನೋ ಪುಣ್ಯಕೋಟಿ
ಅವಳೋ ಮಹಾವಂಚಕಿ...

ಹುಲಿ ಕುರಿ

ಅವಳು ಎಳೆಯ ಕುರಿ
ಇವನು ಬಲಿತ ಹುಲಿ ;)

ಅವಳೆಂದರೆ

ಅವಳೆಂದರೆ ಬೇಲಿ ಹಾರುವ ಹಾವ್ರಾಣಿ,
ಮಾತಲ್ಲೆ ನೋವು ನೀಡುವ ನೀಲವೇಣಿ.

ಸೂರ್ಯ

ಹಗಲು ರಾತ್ರಿಗಳೆಲ್ಲಾ
ಉರಿಯೋ ಸೂರ್ಯ
ನಾನೇ ಇರುವಾಗ,
ಹದಿನೈದು ದಿನಕ್ಕೊಮ್ಮೆ ಬರುವ,
ನನ್ನದೇ ಬೆಳಕಲ್ಲಿ ಬದುಕುವ
ಚಂದ್ರನೇ ಬೇಕೆನುವೆಯಲ್ಲ.
ಸರಿನಾ?

ನಿದ್ದೆ

ನಿದ್ರಿಸುವಾಗ
ಎಚ್ಚರದಿಂದಿರಿ... !!?

ಸಂಜೆಯ ಸಾವು

ಪ್ರತಿ 'ಸಂಜೆ' ಸಾಯುತ್ತೆ
ಬೆಳಗಿನ ಹುಟ್ಟಿಗಾಗಿ.

ಸೂರ್ಯ

ಎಲ್ಲರಂತೆ ಚಂದ್ರನಿಗಿಂತ
ಸೂರ್ಯನೆ ನನಗೆ ಅಚ್ಚುಮೆಚ್ಚು
ಅವನ ಮುಂದೆ ತಲೆ ತಗ್ಗಿಸಿ ನೆಡೆಯುವೆ
ದಿಟ್ಟಿಸಿ ನೋಡಲು ಧೈರ್ಯವಿಲ್ಲದೆ. ;)

ಒಲಮೆ

ಯಾಕೋ ಹುಡುಗಿ
ನಿನ್ನ ಸಣ್ಣ ತೊಳಲಾಟಕೆ
ಕೊರಳುಬ್ಬಿ ಕಣ್ತುಂಬಿ ಬರುತಿದೆ ಒಲುಮೆ !

ಬದುಕು

ದಿಕ್ಕೆಟ್ಟ ಬದುಕಿನಲಿ
ದಾರಿ ಹುಡುಕುವಷ್ಟರಲ್ಲಿ
ದಾರಿಯ ಸ್ವರೂಪವೇ ಬದಲಾದದ್ದು
ನಿನ್ನದೇ ಉಪಸ್ಥಿತಿಯಲಿ..

ಸೆಲ್ಫಿ

ಎಷ್ಟೋ ಮುನಿಸುಗಳ ನಂತರ
ನೀನು ಸಿಕ್ಕಿದ್ದು ಘಾಸಿಗೊಳಿಸಲಿಲ್ಲ,
ಸೆಲ್ಫಿ ತೆಗೆದುಕೊಳ್ಳದೆ ಹೋದೆಯಲ್ಲ
ಅದು ಇನ್ನಿಲ್ಲದಂತೆ ಕಾಡಿತು. :( :PInspired by ಕೆಂಚನೂರರ ಕವಿತೆ.

ಸಿಗರೇಟ್

ನೀನು ಸಿಗರೇಟು ಸುಡುವುದು
ಬೇಸರ ಮಾಡಲಿಲ್ಲ ಗೆಳೆಯ
ಸಿಗರೇಟೇ ನಿನ್ನನ್ನು ಸುಡುವುದು
ಎಂಬುದು ಇನ್ನಿಲ್ಲದಂತೆ ಕಾಡಿತು

ಅವಳ ಸ್ವಗತ

ಕವಿತೆ ಬರೆಯೋದೇ ಕಷ್ಟ ಅದ್ರಲ್ಲೂ ಹುಡುಗಿ ಥರ ಬರೆಯೋದು ಇನ್ನೂ ಕಷ್ಟ. ಸುಮ್ನೆ ಟ್ರೈ ಮಾಡ್ದೆ. ;)
******
ಕವಿತೆ ಬರೆಯಬೇಕೆಂಬ ಆಸೆ ಗೆಳೆಯ
ಅದೇಕೋ ನಿನ್ನ ಹೆಸರ ಹೊರತುಪಡಿಸಿ
ಬೇರಾವ ಪದಗಳು ಹೊಳೆಯುತಿಲ್ಲ.
ಅದೇನು ಮಂಕು ಮಾಡಿದೆಯೋ ಕಾಣೆ
ಕಣ್ತುಂಬಾ ನೀನೇತೆರೆದ ಕದ ಹಾಗೆ ಇದೆ
ಅಮ್ಮ ಹಿತ್ತಲಿಂದ ಕೂಗಿದಾಗಲೆ
ಬಾಗಿಲು ಮುಚ್ಚಿ ಬಂದೆ
ಅದೆಷ್ಟೊಂದು ಧ್ಯಾನ ನಿನ್ನದೆ ನೆನಪಿನಲಿ
ಅದೆಂತಾ ಮೋಡಿ ಮಾಡಿದೆ ನೀನುನಿನ್ನ ಬಾಲ್ಯದ ಹಳೆಯ ಪೋಟೋ ನೋಡುತ್ತಾ
ನಿನ್ನ ನೆನಪೆ ಒತ್ತರಸಿ ಬಂತು
ನನಗೊಂದು ಮಗು ದಯಪಾಲಿಸಬಾರದೆ‌
ನೀನಿಲ್ಲಿದ ಗಳಿಗೆಯಲಿ
ನಿನ್ನ ಮಗುವಿನ ಜೊತೆ ಮಾತಾನಾಡುತ್ತಿದ್ದೆಬೇಗ ನೌಕರಿಯಿಂದ ಬಂದು ಬಿಡು
ನಿನಗಾಗಿ ಗಾಂಧಿ ಬಜಾರಿನಲಿ ಕೊಂಡ
ಕೆಂಪು ಬಣ್ಣದ ಸೀರೆಯುಟ್ಟು
ಮಲ್ಲಿಗೆ ಹೂ ಮೂಡಿದು
ಕಾಯುತಿರುವೆ
ನೀನೇ ಮಾತು ಕೊಟ್ಟಂತೆ
ಕಡಲೆಕಾಯಿ ಪರಿಷೆಗೆ ಹೋಗೋಣ ;)

ನಿಂತ ನೆಲ

ನಾನು ನಿಂತ
ನೆಲದಡಿಯಲ್ಲಿ
ಅದ್ಯಾರ
ಸಮಾಧಿ ಇದೆಯೋ..!?

ಯೋಚನೆ

ಯೋಚಿಸದೆ ಜೊತೆಗಿದ್ದು ಬಿಡು
ಉಳಿದವುಗಳನ್ನ ಮರೆತುಬಿಡು..😍

ನನ್ನ ಕನಸುಗಳ ಸಾಮ್ರಾಜ್ಯದಲಿ ನಿನ್ನದೆ ರಾಜ್ಯಭಾರ ..