Posts

Showing posts from 2017

ಅಮಾಸೆ ೨

ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಹುಟ್ಟನ್ನು ಹಬ್ಬವಾಗಿಸಿದರು ಹ್ಯಾಪಿ ಬರ್ತ್ ಡೇ ಅಮಾಸೇ. 😍

ನಿದ್ದೆ

ಗಾಢ ನಿದ್ದೆಯಲಿ ಚಿಟ್ಟೆ ಎದೆಗೂಡಲಿ ಬೆಚ್ಚಗೆ ಮಲಗಿದೆ

ಹಾರಿಹೋದ ಚಿಟ್ಟೆ

ಪ್ರೀತಿ ಕೊಟ್ಟು ಗೂಡು ಕಟ್ಟಿ ಗೃಹ ಪ್ರವೇಶಕ್ಕೆ ಮುನ್ನ ಯಾರದೋ ಮನೆಯ ಸೇರು ಒದ್ದಿತ್ತು ಚಿಟ್ಟೆ ..

ಚಿಟ್ಟೆ

ಬತ್ತಿ ಹೋದ ಎದೆಯಲ್ಲಿ ನಿನ್ನದೇ ಅಕ್ಷರಗಳ ಚಿಟ್ಟೆ ..

ಮೊಂಬತ್ತಿ

ಅವಳ ಕಣ್ಣ ಬೆಳಕಲ್ಲಿ ಕರಗಿ ಹೋದ ಮೊಂಬ್ಬತ್ತಿ ನಾನು.

ಖಾಲಿ ಬ್ಯಾಟರಿ

ಅವಳು ಮೊಬೈಲ್ ಯ್ಯೂಸ್ ಮಾಡೋ ಪರಿಗೆ, ಖಾಲಿಯಾದ ಬ್ಯಾಟರಿ ನಾನು

ನಕ್ಷತ್ರ

ನಿನ್ನ ಕಣ್ಣಿನಾಳದಲಿ ಜಾರಿಬಿದ್ದ ನಕ್ಷತ್ರ ನಾ. Sept 30, 2017

ಮಾರ್ನಾಮಿ

ನಾನು ಸತ್ತು ಎಷ್ಟೋ ವರ್ಷಗಳಾಗಿವೆ ಈಗಲೂ ನನ್ನ ಹೆಸರಲ್ಲಿ ಮಾರ್ನವಮಿ ಮಾಡಿ ಬಾಡೂಟ ತಿನ್ನುತ್ತಾರೆ. Oct 11, 2017

ಅಮಾಸೆ

ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಬರ್ತ್ ಡೇ ಆಚರಿಸಿದರು. ಹ್ಯಾಪಿ ಬರ್ತ್ ಡೇ ಅಮಾಸೇ. 😍 Oct 20, 2017

ಪಟಾಕಿ ಪ್ರಬಂಧ

ಪರಿಸರ ಕಾಳಜಿಯ ಬಗ್ಗೆ ಪ್ರಬಂಧ ಬರೆದ ಹುಡುಗ ಸಾಲು ಸಾಲು ಸರ ಪಟಾಕಿ ಹೊಡೆದ.. ೨೦ ಅಕ್ಟೋಬರ್ ೨೦೧೭

ಪಟಾಕಿ

ಸ್ವಚ್ಚ ಭಾರತದ ಬಗ್ಗೆ ಭಾಷಣ ಬಿಗಿದು ಹೋದವನ ಸಭೆಯ ಮುಂದೆ ಸಿಡಿದ ಪಟಾಕಿಗಳ ಕಸದ ರಾಶಿ. ೨೧ ಅಕ್ಟೋಬರ್ ೨೦೧೭

ಜೇಡರ ಬಲೆ

'ಜೇಡ'ರ ಹುಡುಗ ಹೆಣೆದ ಬಲೆಗೆ 'ಮಳೆ'ಯ ಹುಡುಗಿ ಬಿದ್ದಳು.

ಕಾಗದದ ದೋಣಿ

ನಿನ್ನೊಲವ ದೋಣಿಯಲಿ ತೇಲಾಡಿದ ನಾನು. ಅದು ಮುಳುಗಿದಾಲೇ ತಿಳಿದಿದ್ದು ಕಾಗದದ ದೋಣಿಯೆಂದು..

ದುರ್ಗದ ಮಳೆ

ದುರ್ಗ ಬಿಸಿಲಿಗೆ ಬಂಡೆಗಳು ಬೆವರಿ ನೀರಾಗಿ ಹರಿದು ಹೊಂಡವಾಯ್ತು. ಹೊಂಡದ ನೀರು ಆವಿಯಾಗಿ ಪಕ್ಕದೂರಿಗೆ ಮಳೆಯಾಯ್ತು ದುರ್ಗ ಬರಡು ಭೂಮಿಯಾಯ್ತು. ಬಯಲು ಸೀಮೆಯಾಯ್ತು. ! :(