Posts

Showing posts from February, 2008

ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು

ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು! ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು? ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕ

ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ

ಕಡಲ ತಡಿಯಲಿ ಕನ್ನಡ ಡಿಂಡಿಮ ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ ಕಳೆದ 75 ವರ್ಷಗಳಲ್ಲಿ ಕನ್ನಡದಲ್ಲಿ ತಯಾರಾಗಿರುವ ಸುಮಾರು 2500 ಚಿತ್ರಗಳಲ್ಲಿ ಕನಿಷ್ಠ 700 ಚಿತ್ರಗಳು ಸಾಹಿತ್ಯ ಕೃತಿಗಳನ್ನಾಧರಿಸಿವೆ. ಅಕ್ಷರ ಮಾಧ್ಯಮದ ಪ್ರಭಾವ ಇಷ್ಟು ಗಾಢ! ಪಿ. ಶೇಷಾದ್ರಿ ಖ್ಯಾತ ಚಲನ ಚಿತ್ರ ನಿರ್ದೇಶಕ 'ನೀವು ಎಷ್ಟು ಪುಸ್ತಕ ಓದಿದ್ದೀರಿ?' ಎಂಬ ಪ್ರಶ್ನೆ ಕೇಳಿದಾಗ ಸಿಗುವ ಉತ್ತರಕ್ಕಿಂತ, 'ನೀವು ಎಷ್ಟು ಸಿನಿಮಾ ನೋಡಿದ್ದೀರಿ?' ಎಂಬ ಪ್ರಶ್ನೆಗೆ ಸಿಗುವ ಉತ್ತರ ಖಂಡಿತ ಭಿನ್ನವಾಗಿರುತ್ತದೆ! ನಮ್ಮ ನಡುವೆ ಪುಸ್ತಕ ಓದದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗಬಹುದೇನೋ, ಆದರೆ ಸಿನಿಮಾ ನೋಡದ ಕಣ್ಣುಗಳು ಸಿಗುವುದು ಸ್ವಲ್ಪ ದುಸ್ತರವೇ! ಹೌದು, ಈ ಸಿನಿಮಾದ ಮೋಡಿಯೇ ಅಂಥದ್ದು. ಈ ದೃಶ್ಯಮಾಧ್ಯಮದ ರಾಜನಿಗೆ ಇಷ್ಟೆಲ್ಲ ಮನ್ನಣೆ ಸಿಕ್ಕಿರುವುದರಲ್ಲಿ ಸಾಹಿತ್ಯ ಲೋಕದ ಕೊಡುಗೆಯೂ ಕಡಿಮೆಯೇನಿಲ್ಲ. ಚಲನಚಿತ್ರ ಮಾಧ್ಯಮವು ಅತ್ಯಂತ ಪ್ರಬಲವಾದ ಸಂವಹನ ಮಾಧ್ಯಮವಾಗಿ ಬೆಳೆದು ಉಳಿದಿರುವುದಕ್ಕೆ ಅದರ ಅತ್ಯಪೂರ್ವ ರೀತಿಯ 'ಕಥಾನಕ' ಸಾಧ್ಯತೆ ಒಂದು ಪ್ರಮುಖ ಕಾರಣ. ಹಾಗಾಗಿಯೇ ಯಾವುದೇ ಸಿನಿಮಾದ ಆತ್ಮವು 'ಕಥೆ' ಮತ್ತು ಕಥಾವಸ್ತುವಾಗಿದೆ. ಪ್ರಕಟಿತ ಕಥೆಯನ್ನು ಆಧರಿಸಿದ ಜಗತ್ತಿನ ಮೊದಲ ಚಿತ್ರ (ದಿ ಗ್ರೇಟ್ ಟ್ರೈನ್ ರಾಬರಿ) ನಿರ್ಮಾಣವಾದದ್ದು 104 ವರ್ಷಗಳ ಹಿಂದೆ, 1903ರಲ್ಲಿ. ಆ ಚಿತ್ರ ಅಂದು ಗಳಿಸಿದ ಯಶಸ್ಸು ಸಿನಿಮಾಕ್ಕಿ

ಚಿತ್ರ

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ

ಕೋಗಿಲೆ ಹಾಡಿದೆ ಕೇಳಿದೆಯ

ಚಿತ್ರ: ಸಮಯದ ಗೊಂಬೆ ೧೯೮೩ ಸಾಹಿತ್ಯ: ಚಿ||ಉದಯ ಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿರುವವರು: ಡಾ||ರಾಜ್, ಎಸ್.ಜಾನಕಿ ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ ಹೊಸ ಹೊಸ ಭಾವ ಕುಣಿಸುತ ಜೀವ ಮರೆಸುತ ನೋವ ಪ್ರೇಮವ ತುಂಬಿ ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದಿ ಕೊಳಲಿಂದ ಹೊರಬಂದ ಸಂಗೀತದಂತೆ ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ ಬಾಳಲಿ ಬೆಳಕು ಮೂಡಿದ ಹಾಗೆ ಸಡಗರ ಬದುಕಲಿ ತುಂಬುವ ಹಾಗೆ ಬಾಡಿದ ಬಳ್ಳಿ ಚಿಗುರಿದ ಹಾಗೆ ಇರುಳಲಿ ಜ್ಯೋತಿ ಬೆಳಗಿದ ಹಾಗೆ ಸವಿಯಾಗಿ ಇಂಪಾಗಿ ಆನಂದದಿಂದ ಕಂಗಳು ಕನಸು ಕಾಣುವ ಹಾಗೆ ತಿಂಗಳ ಬೆಳಕು ತುಂಬಿದ ಹಾಗೆ ಹೃದಯದ ನೈದಿಲೆ ಅರಳಿದ ಹಾಗೆ ಹರುಷದ ಹೊನಲು ಹೊಮ್ಮಿದ ಹಾಗೆ ನೆನಪಿನ ಅಲೆಯಲಿ ತೇಲಿದ ಹಾಗೆ ನೋವೋ ನಲಿವೋ ತಿಳಿಯದ ಹಾಗೆ ಸಂಗೀತ ಸುಧೆಯಿಂದ ಸುಖ ನೀಡುವಂತೆ