ಕೋಗಿಲೆ ಹಾಡಿದೆ ಕೇಳಿದೆಯ

ಚಿತ್ರ: ಸಮಯದ ಗೊಂಬೆ ೧೯೮೩
ಸಾಹಿತ್ಯ: ಚಿ||ಉದಯ ಶಂಕರ್
ಸಂಗೀತ: ಎಂ.ರಂಗ ರಾವ್
ಹಾಡಿರುವವರು: ಡಾ||ರಾಜ್, ಎಸ್.ಜಾನಕಿ

ಕೋಗಿಲೆ ಹಾಡಿದೆ ಕೇಳಿದೆಯ
ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ

ಅಮ್ಮನು ಕಂದನ ಕೂಗುವ ಹಾಗೆ
ತಂಗಿಯು ಅಣ್ಣನ ಹುಡುಕುವ ಹಾಗೆ
ಪ್ರೀತಿಯ ಚಿಲುಮೆ ಉಕ್ಕುವ ಹಾಗೆ
ಕಾತರದಿಂದ ಪಂಚಮ ಸ್ವರದಿ
ಕೊಳಲಿಂದ ಹೊರಬಂದ ಸಂಗೀತದಂತೆ

ಕಾಣದ ಸಿರಿಯ ನೋಡಿದ ಹಾಗೆ
ದೊರಕದ ಮಾಣಿಕ್ಯ ದೊರಕಿದ ಹಾಗೆ
ಬಾಳಲಿ ಬೆಳಕು ಮೂಡಿದ ಹಾಗೆ
ಸಡಗರ ಬದುಕಲಿ ತುಂಬುವ ಹಾಗೆ
ಬಾಡಿದ ಬಳ್ಳಿ ಚಿಗುರಿದ ಹಾಗೆ
ಇರುಳಲಿ ಜ್ಯೋತಿ ಬೆಳಗಿದ ಹಾಗೆ
ಸವಿಯಾಗಿ ಇಂಪಾಗಿ ಆನಂದದಿಂದ

ಕಂಗಳು ಕನಸು ಕಾಣುವ ಹಾಗೆ
ತಿಂಗಳ ಬೆಳಕು ತುಂಬಿದ ಹಾಗೆ
ಹೃದಯದ ನೈದಿಲೆ ಅರಳಿದ ಹಾಗೆ
ಹರುಷದ ಹೊನಲು ಹೊಮ್ಮಿದ ಹಾಗೆ
ನೆನಪಿನ ಅಲೆಯಲಿ ತೇಲಿದ ಹಾಗೆ
ನೋವೋ ನಲಿವೋ ತಿಳಿಯದ ಹಾಗೆ
ಸಂಗೀತ ಸುಧೆಯಿಂದ ಸುಖ ನೀಡುವಂತೆ

Comments

Popular posts from this blog

ದುರ್ಗದ ಮಳೆ

ಅಮಾಸೆ