ಅವಳ ಸ್ವಗತ

ಕವಿತೆ ಬರೆಯೋದೇ ಕಷ್ಟ ಅದ್ರಲ್ಲೂ ಹುಡುಗಿ ಥರ ಬರೆಯೋದು ಇನ್ನೂ ಕಷ್ಟ. ಸುಮ್ನೆ ಟ್ರೈ ಮಾಡ್ದೆ. ;)
******
ಕವಿತೆ ಬರೆಯಬೇಕೆಂಬ ಆಸೆ ಗೆಳೆಯ
ಅದೇಕೋ ನಿನ್ನ ಹೆಸರ ಹೊರತುಪಡಿಸಿ
ಬೇರಾವ ಪದಗಳು ಹೊಳೆಯುತಿಲ್ಲ.
ಅದೇನು ಮಂಕು ಮಾಡಿದೆಯೋ ಕಾಣೆ
ಕಣ್ತುಂಬಾ ನೀನೇ

ತೆರೆದ ಕದ ಹಾಗೆ ಇದೆ
ಅಮ್ಮ ಹಿತ್ತಲಿಂದ ಕೂಗಿದಾಗಲೆ
ಬಾಗಿಲು ಮುಚ್ಚಿ ಬಂದೆ
ಅದೆಷ್ಟೊಂದು ಧ್ಯಾನ ನಿನ್ನದೆ ನೆನಪಿನಲಿ
ಅದೆಂತಾ ಮೋಡಿ ಮಾಡಿದೆ ನೀನು

ನಿನ್ನ ಬಾಲ್ಯದ ಹಳೆಯ ಪೋಟೋ ನೋಡುತ್ತಾ
ನಿನ್ನ ನೆನಪೆ ಒತ್ತರಸಿ ಬಂತು
ನನಗೊಂದು ಮಗು ದಯಪಾಲಿಸಬಾರದೆ‌
ನೀನಿಲ್ಲಿದ ಗಳಿಗೆಯಲಿ
ನಿನ್ನ ಮಗುವಿನ ಜೊತೆ ಮಾತಾನಾಡುತ್ತಿದ್ದೆ

ಬೇಗ ನೌಕರಿಯಿಂದ ಬಂದು ಬಿಡು
ನಿನಗಾಗಿ ಗಾಂಧಿ ಬಜಾರಿನಲಿ ಕೊಂಡ
ಕೆಂಪು ಬಣ್ಣದ ಸೀರೆಯುಟ್ಟು
ಮಲ್ಲಿಗೆ ಹೂ ಮೂಡಿದು
ಕಾಯುತಿರುವೆ
ನೀನೇ ಮಾತು ಕೊಟ್ಟಂತೆ
ಕಡಲೆಕಾಯಿ ಪರಿಷೆಗೆ ಹೋಗೋಣ ;)

Comments

Popular posts from this blog

ದುರ್ಗದ ಮಳೆ

ಅಮಾಸೆ